ಹೊಸಬರ ಜನ್ಮ ನಕ್ಷತ್ರ ಚಿತ್ರಕ್ಕೆ ಚಾಲನೆ
Posted date: 21 Mon, Jan 2013 ? 03:36:36 PM
ಗಣೇಶ್‌ನಾಯ್ಡು ನಿರ್ಮಾಣ ಮತ್ತು ದಯಾಕರ್ ನಿರ್ದೇಶನದ ‘ಜನ್ಮ ನಕ್ಷತ್ರ’ ಚಿತ್ರದ ಚಿತ್ರೀಕರಣಕ್ಕೆ ಸೋಮವಾರ ಗಾಯತ್ರಿ ನಿವಾಸದಲ್ಲಿ ಚಾಲನೆ ದೊರೆಯಿತು. ಈ ಚಿತ್ರಕ್ಕೆ ನಾಗಕಿರಣ್ ನಾಯಕ. ಇವರಿಗೆ ಇಬ್ಬರು ನಾಯಕಿಯರು. ರೂಪಶ್ರೀ ಮತ್ತು ದಿಶಾ ಪೂವಯ್ಯ. ನಿರ್ಮಾಪಕ ಗಣೇಶ್‌ನಾಯ್ಡು ಮತ್ತು ದಯಾಕರ್ ಅವರಿಗೆ ಇದು ಮೊದಲ ಚಿತ್ರ. ಇಬ್ಬರು ನಾಯಕಿಯರು ಅಂದಮೇಲೆ ಇದೊಂದು ತ್ರಿಕೋನ ಪ್ರೇಮಕಥಾ ಹಂದರವಿರುವ ಚಿತ್ರವೇ. ಹಾಗಂತ ಲವ್‌ಸ್ಟೋರಿಯೇ ಚಿತ್ರದ ತುಂಬಾ ಆವರಿಸಿಕೊಂಡಿಲ್ಲ. ಇದರೊಂದಿಗೆ ಹಾರರ್ ಕೂಡ ಚಿತ್ರದ ವಿಶೇಷತೆಗಳಲ್ಲೊಂದು. ಚಿತ್ರದಲ್ಲಿ ಪ್ರೀತಿ, ಪ್ರೇಮದ ಜತೆಯಲ್ಲಿ ಒಂದಷ್ಟು ಸೆಂಟಿಮೆಂಟ್ ಮತ್ತು ಹಾಸ್ಯವೂ ಇದೆ. ಇದುವರೆಗೆ ಹಲವು ಚಿತ್ರಗಳಲ್ಲಿ ಲವರ್‌ಬಾಯ್ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ನಾಯಕ ನಾಗಕಿರಣ್, ಈ ಚಿತ್ರದ ಮೂಲಕ ಮೊದಲ ಸಲ ಅರಣ್ಯಾಧಿಕಾರಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದು, ಸುಮಾರು ೩೦ ದಿನಗಳ ಕಾಲ ಮಡಿಕೇರಿ ಮತ್ತು ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ಸಾಗಲಿದೆ. ಚಿತ್ರದಲ್ಲಿ ಧರ್ಮ, ಮೋಹನ್‌ಜುನೇಜಾ, ಅಂಜಿನಪ್ಪ, ಜಯಲಕ್ಷ್ಮೀ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಟಿಸುತ್ತಿದ್ದಾರೆ. ಚಿತ್ರದ ಐದು ಹಾಡುಗಳಿಗೆ ಅನಂತ್ ಅವರು ಸಂಗೀತ ನೀಡುತ್ತಿದ್ದಾರೆ. ನಾರಾಯಣ್ ಛಾಯಾಗ್ರಹಣವಿದೆ. ಜಾನಿ ಅವರ ಸಾಹಸ ಚಿತ್ರಕ್ಕಿದೆ.
 
GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed